ಸಿಗ್ರಿಡ್ ಅಂಡ್‍ಸೆಟ್ (20 ಮೇ 1882 – 10 ಜೂನ್ 1949) ನಾರ್ವೆ ದೇಶದ ಬರಹಗಾರ್ತಿ. ಇವರಿಗೆ ೧೯೨೮ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲ್ಪಟ್ಟಿದೆ. ಅಂಡ್‍ಸೆಟ್ ಡೆನ್ಮಾರ್ಕ್ ದೇಶದ ಕಲುಂಡ್‍ಬೊರ್ಗ್ ಎಂಬಲ್ಲಿ ಜನಿಸಿದರೂ ಅವರ ಕುಟುಂಬದವರು ಅವರಿಗೆ ಕೇವಲ ಎರಡು ವರ್ಷ ಪ್ರಾಯವಾಗಿದ್ದಾಗಲೇ ನಾರ್ವೆ ದೇಶಕ್ಕೆ ಬಂದು ನೆಲಸಿದರು.ಇವರು ನಾಜಿ ಜರ್ಮನಿಯ ವಿರುದ್ಧವಾಗಿದ್ದುದರಿಂದ ೧೯೪೦ರಲ್ಲಿ ಅಮೇರಿಕಕ್ಕೆ ಹೋದರೂ ಎರಡನೆಯ ಮಹಾಯುದ್ಧದ ನಂತರ ೧೯೪೫ರಲ್ಲಿ ನಾರ್ವೆಗೆ ಪುನಃ ಬಂದು ನೆಲಸಿದರು. ಇವರ ಪ್ರಸಿದ್ಧ ಪುಸ್ತಕ ಕ್ರಿಸ್ಟೀನ್ ಲಾವ್ರನ್ಸ್‍ಡಟ್ಟೆರ್ ಸ್ಕಾಂಡಿನೇವಿಯಾದ ಮಧ್ಯಯುಗೀನ ಜನಜೀವನವನ್ನು ಒಬ್ಬ ಹೆಣ್ಣಿನ ಹುಟ್ಟಿನಿಂದ ಸಾವಿನವರೆಗಿನ ಅನುಭವಗಳ ಮೂಲಕ ಚಿತ್ರಿಸುತ್ತದೆ. ಇದು ಒಂದು ಮೂರು ಸಂಪುಟಗಳ ಕಥಾನಕವಾಗಿದ್ದು,೧೯೨೦ ಮತ್ತು ೧೯೨೨ರಲ್ಲಿ ಪ್ರಕಟವಾಯಿತು. ೧೯೨೫ ಮತ್ತು ೧೯೨೭ರಲ್ಲಿ ಪ್ರಕಟವಾದ ದಿ ಮಾಸ್ಟರ್ ಆಫ್ ಹೆಸ್ವಿಕೆನ್ ಎಂಬ ಕೃತಿ ಕೂಡಾ ಇದೇ ವಿಷಯಗಳನ್ನೊಳಗೊಂಡಿದೆ. ಈ ಎರಡೂ ಬರಹಗಳನ್ನು ಪರಿಗಣಿಸಿ ಅವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . ' Bjerkebæk 2009-01-30 ವೇಬ್ಯಾಕ್ ಮೆಷಿನ್ ನಲ್ಲಿ. 1907–2007 ..///1928 ../susenglish2. 2002-08-10 ವೇಬ್ಯಾಕ್ ಮೆಷಿನ್ ನಲ್ಲಿ. "" – .